Bigg Boss Winner, Build Up, Olle Huduga Pratham said he is election ticket aspirant. He will contest from Chamarajanagar's Hanur, He requested CM to not deploy any congress candidate against him.
ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಚುನಾವಣೆಗೆ ಸ್ಪರ್ಧಿಸುತ್ತಾರಂತೆ. ಹೊಸ ಕ್ಷೇತ್ರ ಹನೂರಿನಿಂದ ಅವರು ಟಿಕೆಟ್ ಆಕಾಂಕ್ಷಿ ಆದರೆ ಅವರ ವಿರುದ್ಧ ಯಾರೂ ಸ್ಪರ್ಧೆ ಮಾಡಬಾರದಂತೆ ಹೀಗೆಂದು ಸ್ವತಃ ಪ್ರಥಮ್ ಹೇಳಿದ್ದಾರೆ. ಹೊಸ ಕ್ಷೇತ್ರ ಹನೂರಿನಿಂದ ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯ ಬರುತ್ತಿದೆ, ನಾನು ಟಿಕೆಟ್ ಆಕಾಂಕ್ಷಿ ಕೂಡ. ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಸಿಎಂ ಅವರ ಬಳಿ ಮಾತನಾಡಿದ್ದೇನೆ, 'ನೀವು ನಿಮ್ಮ ಪಕ್ಷದ ಅಭ್ಯರ್ಥಿಯನ್ನು ನನ್ನ ಎದುರು ಕಣಕ್ಕಿಳಿಸಬೇಡಿ ಆಗ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದೇನೆ, ಆದ್ರೆ ಅವರ ಬಳಿ ಟಿಕೆಟ್ ಕೇಳಿಲ್ಲ' ಎಂದು ಪ್ರಥಮ್ ಹೇಳಿದರು.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ನಾನು ಕೋತಿ ನನ್ ಮಗ ಇರಬಹುದು ಆದರೆ ಕಳ್ಳ ನನ್ ಮಗ ಅಲ್ಲ' ಎಂದು ತಮ್ಮನ್ನು ತಾವೇ ವಿಡಂಬಿಸಿಕೊಂಡು ನಾನು ರಾಜಕೀಯಕ್ಕೆ ತಕ್ಕ ವ್ಯಕ್ತಿ ಎಂದು ಅವರು ಹೇಳಿದರು.